Home

ಸಂಕ್ಷಿಪ್ತ ವಿವರ:-

ಸೋಮವಾರಪೇಟೆ ಪಟ್ಟಣ ಪಂಚಾಯಿತಿಯು ಸೋಮವಾರಪೇಟೆ ತಾಲ್ಲೂಕು, ಕೊಡಗು ಜಿಲ್ಲೆಯಲ್ಲಿದೆ. ಪಟ್ಟಣ ಪಂಚಾಯಿತಿ ಸೋಮವಾರಪೇಟೆಯು ದಿ:07-05-1996ರಲ್ಲಿ ಸ್ಥಾಪನೆಯಾಯಿತು.  ಸೋಮವಾರಪೇಟೆ ಪಟ್ಟಣ ಪಂಚಾಯಿತಿಯು ಮೈಸೂರುನಿಂದ  ಸುಮಾರು 115 ಕೀಲೋಮೀಟರ್ ದೂರದಲ್ಲಿರುತ್ತದೆ.  2001 ಜನಗಣತಿಯ ಪ್ರಕಾರ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 7220 ಜನಸಂಖ್ಯೆಯನ್ನು ಹೊಂದಿರುತ್ತದೆ.  ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 11 ವಾರ್ಡ್ ಗಳಿದ್ದು  11 ಚುನಾಯಿತ ಸದಸ್ಯರು ಹಾಗೂ 3 ನಾಮನಿರ್ದೇಶಿತಸದಸ್ಯರಿರುತ್ತಾರೆ. ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯು ಒಟ್ಟು 8.83 ಚದರ ಕೀಲೋಮೀಟರ್ ಗಳಿರುತ್ತದೆ.  ಪ್ರವಾಸ ತಾಣಗಳಾದ ಮಲ್ಲಳ್ಳಿ ಪಾಲ್ಸ್ ಸೋಮವಾರಪೇಟೆಯಿಂದ  30 ಕೀಲೋಮೀಟರ್ ದೂರದಲ್ಲಿರುತ್ತದೆ. ಕುಕ್ಕೆ ಸುಬ್ರಮಣ್ಯ ಕಡೆಗಿನ ರಸ್ತೆಯಲ್ಲಿ ಪುಪ್ಷಗಿರಿ ಬೆಟ್ಟವಿದೆ. ಹಲವಾರು ವನ್ಯ ಜೀವಿಗಳ ತವರೂರಾಗಿದೆ. ಹೊನ್ನಮ್ಮನ ಕೆರೆ  ಸೋಮವಾರಪೇಟೆಯಿಂದ 6 ಕಿ.ಮೀ. ದೂರದಲ್ಲಿದೆ. ಜಾಗವು ಒಂದು ಪ್ರವಾಸಿ ಹಾಗೂ ಪಾರಂಪರಿಕ ಜಾಗವೆಂದು ಹೆಸರುವಾಸಿಯಾಗಿದೆ. ಇದರ ಸುತ್ತಲು ಬೆಟ್ಟಗಳಿವೆ  ಇದರಲ್ಲಿಮೋರಿಹಾಗೂಗವಿಬೆಟ್ಟಗಳು ಬಹಳ ಹೆಸರುವಾಸಿ. ಬೆಳೂರುಬಾಣೆಯು ಪ್ರವಾಸಿಗರ ತಾಣವಾಗಿದ್ದು, ಇದು ಸೋಮವಾರಪೇಟೆಯಿಂದ 8 ಕಿ.ಮೀ.ದೂರದಲ್ಲಿದೆ.



ಗಣಕೀಕರಣ : 

ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳನ್ನು ಗುರುತಿಸಿ, ಆಸ್ತಿ ವಿವರಗಳನ್ನು ಸಂಗ್ರಹಿಸಿದ್ದು, ಮಾಹಿತಿಯನ್ನು ಗಣಕೀಕರಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ. ಶೀಘ್ರದಲ್ಲೇ ನಾಗರೀಕರು ಇದರ ಸೌಲಭ್ಯ ಪಡೆಯಬಹುದಾಗಿರುತ್ತದೆ. ಇದರ ಜೊತೆಗೆ 1990 ನೇ ಸಾಲಿನಿಂದ ಈವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು, ನಾಗರೀಕರು ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ. ಹಾಗೂ ಸಾರ್ವಜನಿಕರು ದೂರುಗಳನ್ನು ದಾಖಾಲಿಸಲು ಅವಕಾಶವಿದ್ದು, ದೂರುಗಳನ್ನು ಖುದ್ದಾಗಿ ಅಥವಾ ಪೋನ್ ಅಥವಾ ಅಂತರ್ಜಾಲದ ಮೂಲಕ ನೋಂದಾಯಿಸಿ, ದೂರಿನ ಸ್ವರೂಪವನ್ನು ನೋಡಬಹುದಾಗಿದೆ. ಹಾಗೂ ದ್ವಿನಮೂದು ಲೆಕ್ಕ ಪದ್ದತಿಯ ಕಾರ್ಯವು ಪ್ರಗತಿಯಲ್ಲಿರುತ್ತದೆ.



ಗಣಕೀಕರಣ ಯೋಜನೆಗಳು:

ಜನನ-ಮರಣ  (Birth and Death Online Application):

1990 ರಿಂದ ಪ್ರಸಕ್ತ ಸಾಲಿನವರೆಗಿನ ಎಲ್ಲಾ ಜನನ ಹಾಗೂ ಮರಣ ದಾಖಲೆಗಳು ಗಣಕೀಕರಣಗೊಳಿಸಲಾಗಿದೆ, ಸಾರ್ವಜನಿಕರು ಪಟ್ಟಣ ಪಂಚಾಯಿತಿಯ ಅಧಿಕೃತ ವೈಬ್ ಸೈಟ್ ಮೂಲಕ ದಾಖಲೆಗಳನ್ನು ಪರಿಶೀಲಿಸಬಹುದು ಹಾಗು ಜನನ-ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ. ಅಧಿಕೃತ ವೆಬ್ ಸೈಟ್ link:  http://www.somwarpettown.gov.in/egbnd/index.jsp 

ಸಾರ್ವಜನಿಕ ದೂರು ನಿವಾರಣಾ ಕೇಂದ್ರ  (Public Grievance Redressal System (P.G.R)):

ಕೆ.ಎಂ.ಆರ್.ಪಿ. ಯೋಜನೆಯಡಿ ಸಾರ್ವಜನಿಕ ದೂರು ನಿವಾರಣಾ ಕೇಂದ್ರ ತೆರೆಯಲಾಗಿದ್ದು, ಕೇಂದ್ರವು ವಾರದ 7 ದಿನಗಳು ಹಾಗೂ ದಿನದ 8 ಘಂಟೆಗಳು ಕಾರ್ಯನಿರ್ವಹಿಸಿರುತ್ತದೆ. ಸಾರ್ವಜನಿಕರು ದೂರುಗಳನ್ನು ಪತ್ರ, ದೂರವಾಣಿ ಹಾಗು ಆನ್ ಲೈನ್ ಆಪ್ಲೀಕೇಷನ್ ಮೂಲಕ ಸಲ್ಲಿಸಬಹುದು ಸಹಾಯವಾಣಿ: 08256-284567 ವೆಬ್.ಸೈಟ್ http://www.somwarpettown.gov.in/pgr/grievance-redressal.jsp 

 ಸ್ಥಳೀಯ ಸಂಸ್ಥೆಯ ವೆಬ್ ಸೈಟ್:

ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಅಧಿಕೃತ ಅಂತರ್ಜಾಲ  http://www.somwarpettown.gov.in  ಸಾರ್ವಜನಿಕರಿಗೆ ಬೇಕಾದ ಕಛೇರಿ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳನ್ನು ಅಂತರ್ಜಾಲದ ಮೂಲಕ ಪಡೆದುಕೊಳ್ಳಬಹುದು.

ಭೌಗೋಳಿಕ ಆಸ್ತಿ ತೆರಿಗೆ ಯೋಜನೆ:

ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬರುವ ಆಸ್ತಿಗಳನ್ನು ಗುರುತಿಸಿ, ಆಸ್ತಿ ವಿವರಗಳನ್ನು ಸಂಗ್ರಹಿಸಿದ್ದು, ಮಾಹಿತಿಯನ್ನು ಗಣಕೀಕರಣಗೊಳಿಸಲಾಗಿದೆ, ಸಾರ್ವಜನಿಕರು ಪಟ್ಟಣ ಪಂಚಾಯಿತಿಯ ಅಧಿಕೃತ ಅಂತರ್ಜಾಲ http://www.somwarpettown.gov.in/ptisnn/public/citizenIndex.jsp ದಾಖಲೆಗಳನ್ನು ಪರಿಶೀಲಿಸಬಹುದು ಹಾಗು Tax reciept ನ್ನು  ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ. DCB updation ಕಾರ್ಯವು ಪ್ರಗತಿಯಲ್ಲಿರುತ್ತದೆ.

 

 

 

The contents of this page are maintained by Chief Officer, Somwarpet TP.

Last updated  22-12-2012

No. Of Visitors :
Last Updated   : 10/06/2013  Release History
Release 2.0.0, Powered By Karnataka Municipal Data Society & maintained by Somwarpet TP
This website can best viewed with the resolution 1024 * 768 using Internet Explorer 7.0 or above.
Valid CSS!